- ಕೋಲಾರ ಮೀಸಲು ಲೋಕಸಭಾ ಕ್ಷೇತ್ರದ
- 17 ಚುನಾವಣೆಗಳಲ್ಲಿ 15 ಬಾರಿ ಕಾಂಗ್ರೆಸ್ ಗೆಲವು
- ಸ್ವಪಕ್ಷೀಯರ ವಿರೋಧ 2 ಬಾರಿ ಕಾಂಗ್ರೆಸ್ ಸೋಲು
- ಎರಡು ಬಾರಿ ಜನತಾ ಪರಿವಾದ ಅಭ್ಯರ್ಥಿಗಳ ಗೆಲವು
ನ್ಯೂಜ್ ಡೆಸ್ಕ್:ಲೋಕಸಭಾ ಚುನಾವಣೆ ಹತ್ತಿರವಾಗುತ್ತಿದೆ, ಚುನಾವಣೆಯ ಅಧಿಸೂಚನೆ ಮಾರ್ಚ್ ಮೊದಲ ವಾರದಲ್ಲಿ ಪ್ರಕಟವಾಗುವ ಸಾಧ್ಯತೆಯಿದ್ದು, ಜಿಲ್ಲಾಡಳಿತ ಈ ಸಂಬಂಧ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ ಇತ್ತ ರಾಜಕೀಯ ಪಕ್ಷಗಳಲ್ಲಿ ರಾಜಕೀಯ ಚೆಕ್ಕಾಚಾರಗಳು ಶುರುವಾಗಿದ್ದು ನಿಧಾನವಾಗಿ ಚುನಾವಣೆ ಕಾವು ಏರುತ್ತಿದೆ ಜೆಡಿಎಸ್,ನೊಂದಿಗೆ ಮೈತ್ರಿ ಮಾಡಿಕೊಂಡಿರುವ ಬಿಜೆಪಿ ಸೀಟು ಹಂಚಿಕೆ ವಿಚಾರದಲ್ಲಿ ಸಂಕ್ರಾಂತಿ ನಂತರ ಎನ್ನಲಾಗುತ್ತಿದೆ,ಇನ್ನು ಇಂಡಿಯಾ ಮೈತ್ರಿ ಕೂಟದ ಅಂಗ ಪಕ್ಷವಾಗಿರುವ ಕಾಂಗ್ರೆಸ್ಗೆ, ಕರ್ನಾಟಕದ ಮಟ್ಟಿಗೆ ಸೀಟು ಹಂಚಿಕೆ ತಲೆ ಬಿಸಿ ಇಲ್ಲ ಎನ್ನಬಹುದು. ಕರ್ನಾಟಕದಲ್ಲಿ ಇಂಡಿಯಾ ಮೈತ್ರಿ ಕೂಟದ ಕಾಂಗ್ರೆಸ್ ಬಿಟ್ಟರೆ ಯಾವುದೆ ಇತರೆ ಪಕ್ಷಗಳು ಪ್ರಬಲವಾಗಿಲ್ಲ. ಹಾಗಾಗಿ, ಕೋಲಾರ ಮೀಸಲು ಲೋಕಸಭಾ ಕ್ಷೇತ್ರ ಸೇರಿದಂತೆ ಕರ್ನಾಟಕದಾದ್ಯಂತ ಎಲ್ಲಾ 28 ಕ್ಷೇತ್ರಗಳಲ್ಲೂ ಕಾಂಗ್ರೆಸ್ ಏಕಾಂಗಿಯಾಗಿ ಸ್ಪರ್ಧೆಮಾಡುವುದು ಖಚಿತ ಎನ್ನುವ ಮಾತಿದೆ.
ಕಾಂಗ್ರೆಸ್ ವಿರುದ್ಧ ಜಂಟಿ ಹೋರಾಟಕ್ಕೆ ಸಜ್ಜಾಗಿರುವ ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿ ಮಾಡಿಕೊಂಡು ಹೈಕಮಾಂಡ್ ಹಂತದಲ್ಲಿ ದೋಸ್ತಿ ಮಾತುಕತೆ ಆಗಿದೆ. ಬಿಜೆಪಿಗೆ ಎಷ್ಟು ಸ್ಥಾನ, ಜೆಡಿಎಸ್ಗೆ ಎಷ್ಟು ಸ್ಥಾನ ಅನ್ನೋದು ಭಾರೀ ಕುತೂಹಲ ಕೆರಳಿಸಿದೆ.ದೇವೇಗೌಡ ಅಂಡ್ ಸನ್ಸ್ ಜೊತೆ ಸ್ವತಃ ಪ್ರಧಾನಿ ಮೋದಿ ಮಾತುಕತೆ ನಡೆಸಿದ್ದಾರೆ ಸೀಟು ಹಂಚಿಕೆ ಫೈನಲ್ ಅನ್ನು ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ. ಪಿ. ನಡ್ಡಾ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರೊಂದಿಗೆ ಕೂತು ಮಾತನಾಡಿರುವ ಜೆಡಿಎಸ್ ನಾಯಕರು ಧನುರ್ಮಾಸ ಮುಗಿದು ಸಂಕ್ರಾಂತಿ ನಂತರ ಫೈನಲ್ ಮಾಡೋಣ ಎಂದು ವಾಪಸ್ಸು ಬಂದಿದ್ದಾರಂತೆ ಇದಕ್ಕೆ ಪೂರಕ ಎನ್ನುವಂತೆ ಸಂಕ್ರಾಂತಿ ಬಳಿಕ ಸಿಹಿ ಸುದ್ದಿ ನೀಡ್ತೇನೆ ಅಂತಾ ಕುಮಾರಸ್ವಾಮಿ ಹೇಳಿದ್ದಾರೆ.
ರಾಜಕೀಯ ಲೆಕ್ಕಾಚಾರಗಳ ಪ್ರಕಾರ ಹಳೇ ಮೈಸೂರು ಭಾಗದ ಕ್ಷೇತ್ರಗಳಲ್ಲಿ ಹಾಸನದಲ್ಲಿ ಹಾಲಿ ಜೆಡಿಎಸ್ ಸಂಸದ ಇದ್ದು ಹಾಸನ ಸೇರಿದಂತೆ ಕನಿಷ್ಟ ನಾಲ್ಕರಿಂದ ಐದು ಕ್ಷೇತ್ರಗಳಾದರೂ ಜೆಡಿಎಸ್ಗೆ ಸಿಗಬಹುದು ಅನ್ನೋವ ನಿರೀಕ್ಷೆ ಇದ್ದು ಅವುಗಳಲ್ಲಿ ಕೋಲಾರ ಮೀಸಲು ಲೋಕಸಭಾ ಕ್ಷೇತ್ರವನ್ನು ಜೆಡಿಎಸ್ ಪಡೆದುಕೊಳ್ಳಬಹುದು ಎಂಬ ಮಾತು ಕೇಳಿಬರುತ್ತಿದೆ
ಕೋಲಾರ ಜಿಲ್ಲಾ ಇತಿಹಾಸ
ಕೋಲಾರ ದೀರ್ಘ ಇತಿಹಾಸ ಇರುವ ಜಿಲ್ಲೆ. ಗಂಗರ ರಾಜಧಾನಿಯಾಗಿತ್ತು,ಗಂಗರು ಕಟ್ಟಿಸಿದ ಹಲವಾರು ದೇವಾಲಯಗಳು ಇಲ್ಲಿದೆ ಕೋಲಾರಮ್ಮ ದೇವಾಲಯ ಹೆಚ್ಚು ಪ್ರಸಿದ್ಧ. ಕಾಲಾಂತರದಲ್ಲಿ ಗಂಗರು,ಚೋಳರು, ಕದಂಬ, ಪಲ್ಲವ, ಚಾಳುಕ್ಯ, ಹೊಯ್ಸಳ, ರಾಷ್ಟ್ರಕೂಟರು, ಮೈಸೂರು ಅರಸರು, ಹೈದರಾಲಿ-ಟಿಪ್ಪು ಅವರುಗಳಿಂದ ಆಳ್ವಕೆಗೆ ಒಳಗಾಗಿರುವ ಕೋಲಾರ ವಿವಿಧತೆಯಲ್ಲಿ ಏಕತೆ ಸಾಧಿಸಿದೆ ಮಳೆಯಾಧರಿತ ಬಯಲುಸೀಮೆಯಾಗಿರುವ ಇಲ್ಲಿನ ರೈತರ ಶ್ರಮ ಅನನ್ಯ ತೋಟಗಾರಿಕೆ, ಹೈನಾಗುರಾಕೆ ಪ್ರಧಾನ ಕೃಷಿ ಹಸುಸಾಕಾಣಿಕೆಯಿಂದ ಮಿಲ್ಕು ಮತ್ತು ರೇಷ್ಮೇ ಬೆಳೆಯಿಂದ ಸಿಲ್ಕುಗೂ ಖ್ಯಾತಿ ಇದ್ದು ಮುಖ್ಯ ಆದಾಯದವಾಗಿದೆ.
ಕೋಲಾರ ಮೀಸಲು ಲೋಕಸಭಾ ಕ್ಷೇತ್ರದ ಇತಿಹಾಸ
ಕೋಲಾರ ಮೀಸಲು ಲೋಕಸಭಾ ಕ್ಷೇತ್ರದಲ್ಲಿ ಎಂಟು ವಿಧಾನಸಭಾ ಕ್ಷೇತ್ರವನ್ನು ಒಳಗೊಂಡಿದೆ ಕೋಲಾರ ಜಿಲ್ಲೆಯ ಆರು ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ಮತ್ತು ಚಿಂತಾಮಣಿ ಎರಡು ವಿಧಾನ ಸಭಾ ಕ್ಷೇತ್ರಗಳನ್ನು ಒಳಗೊಂಡಿದೆ.
ಮೈಸೂರು ರಾಜ್ಯದಲ್ಲಿ ಮೂರು ಚುನಾವಣೆ ಕಂಡಿರುವ ಲೋಕಸಭ ಕ್ಷೇತ್ರದಲ್ಲಿ ಇದುವರಿಗೂ ನಡೆದ 17 ಚುನಾವಣೆಗಳಲ್ಲಿ 15 ಬಾರಿ ಇಲ್ಲಿನ ಜನ ಕಾಂಗ್ರೆಸ್ ಅನ್ನು ಗೆಲ್ಲಿಸಿದ್ದಾರೆ ಮೊನ್ನೆ ನಡೆದಂತ ವಿಧಾನಸಭಾ ಚುನಾವಣೆಯಲ್ಲಿ ಕೋಲಾರ ಲೋಕಸಭಾ ಕ್ಷೇತ್ರದ ಎಂಟು ವಿಧಾನಸಭಾ ಕ್ಷೇತ್ರಗಳಲ್ಲಿ ಶ್ರೀನಿವಾಸಪುರ,ಮುಳಬಾಗಿಲು ಹಾಗು ಶಿಡ್ಲಘಟ್ಟ ಮೂರು ಕ್ಷೇತ್ರಗಳಲ್ಲಿ ಜೆಡಿಎಸ್ ಶಾಸಕರು, ಕೆ.ಜಿ.ಎಫ್,ಬಂಗಾರಪೇಟೆ,ಮಾಲೂರು,ಕೋಲಾರ ಚಿಂತಾಮಣಿ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಶಾಸಕರು ಗೆದ್ದಿರುತ್ತಾರೆ ಚಿಂತಾಮಣಿಯಲ್ಲಿ ರಾಜ್ಯ ಸರ್ಕಾರದ ಪ್ರಭಾವಿ ಮಂತ್ರಿ ಡಾ.ಎಂ.ಸಿ.ಸುಧಾಕರ್ ಇದ್ದಾರೆ.
ಕೋಲಾರ ಲೋಕಸಭಾ ಕ್ಷೇತ್ರ ಕಾಂಗ್ರೆಸ್ ಬದ್ರಕೋಟೆ
ಆಗೊಮ್ಮೆ 1984 ರಲ್ಲಿ ಜನತಾ ಪಕ್ಷದ ಅಭ್ಯರ್ಥಿ ಹಾಗು ಈಗೊಮ್ಮೆ 2019 ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಗೆದ್ದಿದ್ದು ಹೊರತು ಪಡಿಸಿದರೆ ಬಹುತೇಕ ಚುನಾವಣೆಗಳಲ್ಲಿ ಕಾಂಗ್ರೆಸ್ ಗೆದ್ದಿರುವುದು ಇಲ್ಲಿ ಇತಿಹಾಸ.ಕಳೆದ ಲೋಕಸಭಾ ಚುನಾವಣೆಯಲ್ಲಿ ಕೋಲಾರದಲ್ಲಿ ಬಿಜೆಪಿ ಮತ್ತು 1984 ರಲ್ಲಿ ಜನತಾಪಕ್ಷದ ಅಭ್ಯರ್ಥಿ ಎರಡು ಚುನಾವಣೆಯಲ್ಲಿ ವಿಪಕ್ಷಗಳು ಗೆದ್ದಿದ್ದು ಬಿಟ್ಟರೆ ಎಲ್ಲಾ ಚುನಾವಣೆಗಳಲ್ಲೂ ನಿರಂತರವಾಗಿ ಕಾಂಗ್ರೆಸ್ ಗೆಲವು ಸಾಧಿಸಿದೆ. ದೊಡ್ಡತಿಮ್ಮಯ್ಯ ಎನ್ನುವ ಕಾಂಗ್ರೆಸ್ ಅಭ್ಯರ್ಥಿ 1952 ರಿಂದ 1957,1962 ಮೂರು ಅವಧಿಗೆ ಸಂಸದರಾಗಿದ್ದರು ನಂತರ 1967 ರಲ್ಲಿ ಗೆಲವು ಸಾಧಿಸಿದ ಜಿವೈ ಕೃಷ್ಣನ್ 1971,1977,1980 ನಾಲ್ಕು ಬಾರಿ ಸಂಸದರಾಗಿದ್ದರು ನಂತರದಲ್ಲಿ ಜಿವೈ ಕೃಷ್ಣನ್ ವಿರುದ್ದ ಸ್ಚಪಕ್ಷೀಯರೆ ಅಸಮಧಾನಗೊಂಡ ಪರಿಣಾಮ 1984 ರಲ್ಲಿ ಜನತಾ ಪಕ್ಷದ ನೇಗಿಲು ಹೊತ್ತ ರೈತನ ಗುರುತಿನ ಅಭ್ಯರ್ಥಿ ವಿ.ವೆಂಕಟೇಶ್ ವಿಜಯದ ಪತಾಕೆ ಹಾರಿಸಿದ್ದರು ನಂತರ 1989 ಕಾಂಗ್ರೆಸ್ ನ ವೈ.ರಾಮಕೃಷ್ಣ ಗೆಲವು ಸಾಧಿಸಿದ್ದರೆ 1991 ರಿಂದ 1996, 1998,1999,2004,2009,2014, ಡಬಲ್ ಹ್ಯಾಟ್ರಿಕ್ ಬಾರಿಸಿ ಏಳು ಬಾರಿ ಕೋಲಾರದ ಸಂಸದರಾಗಿ ಸೋಲಿಲ್ಲದ ಸರದಾರರಾಗಿದ್ದ ಕೆ.ಎಚ್.ಮುನಿಯಪ್ಪ 2019 ಚುನಾವಣೆಯಲ್ಲಿ ಸ್ಚಪಕ್ಷೀಯರ ಪ್ರಭಲ ವಿರೋಧದಿಂದ ಬಾರಿ ಅಂತರದಲ್ಲಿ ಸೂಲುಂಡರು,ಭಾರತೀಯ ಜನತಾ ಪಕ್ಷದ ಅಭ್ಯರ್ಥಿಯಾಗಿದ್ದ ಎಸ್.ಮುನಿಸ್ವಾಮಿ ಗೆದ್ದು ಬೀಗಿದರು.ಹೀಗಾಗಿ ಕೋಲಾರ ಮೀಸಲು ಲೋಕಸಭಾ ಕ್ಷೇತ್ರ ಕಾಂಗ್ರೆಸ್ ಬದ್ರಕೋಟೆ ಎನ್ನಬಹುದಾಗಿದೆ ಆದರೆ ಈಗ ಬದಲಾಗದ ಸನ್ನಿವೇಶದಲ್ಲಿ ರಾಜ್ಯದಲ್ಲಿ ಯಾರೆ ಅಧಿಕಾರದಲ್ಲಿ ಇರಲಿ ಬಿಡಲಿ ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಬೇಕು ಎನ್ನುವ ಚೆಕ್ಕಾಚಾರ ನಡೆಯುತ್ತಿದೆ ಜೋತೆಗೆ ಕೋಲಾರ ಲೋಕಸಭಾ ವ್ಯಾಪ್ತಿಯ ವಿಧಾನಸಭಾ ಕ್ಷೇತ್ರಗಳಲ್ಲಿ ಜೆಡಿಎಸ್ ಒಟ್ ಬ್ಯಾಂಕ್ ಇದೆ ಈ ಎಲ್ಲಾ ಕೂಡಿ-ಕಳೆಯುವ ಲೆಕ್ಕಾಚಾರದಲ್ಲಿ ಕೋಲಾರ ಮೀಸಲು ಲೋಕಸಭಾ ಕ್ಷೇತ್ರವನ್ನು ಮೈತ್ರಿ ಧರ್ಮದಲ್ಲಿ ಬಹುತೇಕ ಜೆಡಿಎಸ್ ಪಾಲಾಗುತ್ತದೆ ಎಂಬುದಾಗಿ ರಾಜಕೀಯ ಪಂಡಿತರು ಹೇಳುತ್ತಾರೆ.
ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿ ವರ್ಕೌಟ್ ಆಗುತ್ತ?
ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿ ಅಭ್ಯರ್ಥಿ ನೂರಕ್ಕೆ ನೂರಷ್ಟು ಗೆಲವು ಸಾಧಿಸುತ್ತಾರ ಎಂಬ ಮಾತು ಈಗಾಗಲೆ ಕ್ಷೇತ್ರಾದ್ಯಂತ ಕೇಳಿಬರುತ್ತಿದೆ. ಮೂರ್ನಾಲ್ಕು ಚುನಾವಣೆಯಲ್ಲಿ ಬಿಜೆಪಿ ಹಾಗೂ ಜೆಡಿಎಸ್ ನಡುವಿನ ಮತ ವಿಭಜನೆಯಿಂದ ಕಾಂಗ್ರೆಸ್ ಅಭ್ಯರ್ಥಿ ಅನಾಯಸವಾಗಿ ಗೆಲ್ಲುತ್ತಿದ್ದರು ಮೊನ್ನೆ ನಡೆದ ವಿಧಾನ ಸಭಾ ಚುನಾವಣೆಯಲ್ಲೂ ಕೆ.ಜಿ.ಎಫ್ ಮಾಲೂರು,ಬಂಗಾರಪೇಟೆ ವಿಧಾನಸಭಾ ಕ್ಷೇತ್ರಗಳಲ್ಲಿನ ಮತಗಳಿಕೆಯ ಲೆಕ್ಕಾಚಾರ ಗಮನಿಸಿದರೆ ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿಯಿಂದ ಕಾಂಗ್ರೆಸ್ ಅಭ್ಯರ್ಥಿಗೆ ಚುನಾವಣೆ ಅಷ್ಟು ಸಲಿಸಲ್ಲ ಎನ್ನಲಾಗುತ್ತಿದೆ.