ದಾಂದಲೆ ಕುರಿತು ತನಿಖೆ ಅರಂಭ
ಸಾವಿರಾರು ಐಫೋನ್ಗಳು ಲೂಟಿ?
440 ಕೋಟಿ ನಷ್ಟ
ಸೈಬರ್ ಪೋಲಿಸರಿಂದ ತನಿಖೆ
ಲೂಠಿಯಾದ ಐ ಫೋನ್ ಉಪಯೋಗಕ್ಕೆ ಬಾರದು ಎನ್ನಲಾಗುತ್ತಿದೆ!
ಕೋಲಾರ:-ಆ್ಯಪಲ್ ಐ–ಫೋನ್ ತಯಾರಿಸುವ ಬಹುರಾಷ್ಟ್ರೀಯ ವಿಸ್ಟ್ರಾನ್ ಕಂಪನಿಯಲ್ಲಿ ಗುತ್ತಿಗೆ ಆಧಾರದಲ್ಲಿ ಸುಮಾರು 10 ಸಾವಿರ ಕಾರ್ಮಿಕರನ್ನ ನೇಮಿಸಿಕೊಂಡಿತ್ತು. ಕಾರ್ಮಿಕರನ್ನು ನೇಮಕ ಮಾಡಿಕೊಂಡಿದ್ದ ಮಾನವ ಸಂಪನ್ಮೂಲ ಏಜೆನ್ಸಿಗಳು ಕಾರ್ಮಿಕರ ಕಷ್ಟದ ಸಂಬಳದ ಹಣವನ್ನು ಸಮರ್ಪಕವಾಗಿ ನೀಡದೆ ತೊಂದರೆ ನೀಡಿದ ಪರಿಣಾಮ ಕಾರ್ಮಿಕರು ಗಲಭೆ ಸೃಷ್ಠಿಸಲು ಕಾರಣವಾಗಿದೆ ಎನ್ನುವ ಆರೋಪ ಕೇಳಿಬಂದಿದೆ.
ಸದ್ಯ ತೈವಾನ್ ಮೂಲದ ವಿಸ್ಟ್ರಾನ್ ಇನ್ಫೋಕಾಮ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಕಂಪನಿಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ.
ಕಾರ್ಖಾನೆಯ ಆವರಣದಲ್ಲಿ ಶನಿವಾರ ನಡೆದ ದಾಂದಲೆಯ ನಂತರ ಉತ್ಪಾದನೆ ಚಟುವಟಿಕೆ ಸ್ಥಗಿತಗೊಳಿಸಿದ ಕಾರಣ 10 ಸಾವಿರ ಕಾರ್ಮಿಕರ ಭವಿಷ್ಯ ಅತಂತ್ರವಾಗಿದೆ.
ಕೋಲಾರದ ನರಸಾಪುರದ ಕೈಗಾರಿಕ ಪ್ರದೇಶದಲ್ಲಿರುವ ವಿಸ್ಟ್ರಾನ್ ಐ ಫೋನ್ ಘಟಕದಲ್ಲಿ ಕಾರ್ಮಿಕರ ದಾಂದಲೆಯಿಂದ ಸುಮಾರು 437 ಕೋಟಿ ರೂ. ನಷ್ಟ ಉಂಟಾಗಿದೆ ಎಂದು ಅಂದಾಜಿಸಲಾಗಿದೆ.
ಸಂಸ್ಥೆಯು ದಾಂದಲೆಯ ಸಮಯದಲ್ಲಿ ಐಫೋನ್ಗಳ ಲೂಟಿ ಸಹ ಆಗಿದೆ ಎನ್ನಲಾಗುತ್ತಿದೆ. ಇದೆಲ್ಲದರ ಬಗ್ಗೆ
ನಷ್ಟದ ಲೆಕ್ಕ ಪಡೆಯಲು ವಿಸ್ಟ್ರಾನ್ ವಿವರವಾದ ತನಿಖೆ ಪ್ರಾರಂಭಿಸಿದೆ ಮತ್ತು ಹೆಚ್ಚಿನ ಲೆಕ್ಕ ಪರಿಶೋಧಕರನ್ನು ನರಸಾಪುರದ ಸ್ಥಾವರಕ್ಕೆ ಕಳುಹಿಸುತ್ತಿದೆ ಎಂದು ಹೇಳಿಕೆಯಲ್ಲಿ ತಿಳಿಸಿದೆ.
ದಾಂದಲೆ ಮತ್ತು ಕಾರ್ಮಿಕ ಪಾವತಿ ಮಾನದಂಡಗಳಿಗೆ ಕಾರಣವನ್ನು ಕಂಡುಹಿಡಿಯಲು ಸರ್ಕಾರದ ತನಿಖೆ ನಡೆಯುತ್ತಿದೆ.
ಕಳೆದ ಕೆಲವು ತಿಂಗಳುಗಳಲ್ಲಿ ಅನೇಕ ಕಾರ್ಮಿಕರಿಗೆ ನಿಗದಿತ ವೇತನ ನೀಡಲಾಗಿಲ್ಲ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ ಎಂದು ಸರ್ಕಾರಿ ಅಧಿಕಾರಿಗಳು ತಿಳಿಸಿದ್ದಾರೆ. ಕೋಲಾರ ಜಿಲ್ಲೆಯ ವಿಸ್ಟ್ರಾನ್ ಸ್ಥಾವರದಲ್ಲಿ ಮೂರು ತಿಂಗಳ ಹಿಂದೆ ಕಾರ್ಯಾಚರಣೆ ಆರಂಭವಾಯಿತು.
ಅದೇ ಸರ್ಕಾರಿ ಅಧಿಕಾರಿಗಳು ವಿಸ್ಟ್ರಾನ್ ಮ್ಯಾನೇಜ್ಮೆಂಟ್ ನವರು ಕಾರ್ಮಿಕರಿಗೆ ನೀಡಬೇಕಾಗಿದ್ದ ಹಣವನ್ನು ಪಾವತಿಮಾಡಲಾಗಿತ್ತು ಆದರೂ ಕಾರ್ಮಿಕರಿಗೆ ಹಣ ಪಾವತಿಯಾಗದ ಇರುವುದು ಆಗಿರುವಂತ ವ್ಯತ್ಯಾಸಗಳ ಬಗ್ಗೆ ತನಿಖೆಯಾಗಬೇಕಿದೆ
ವಿಸ್ಟ್ರಾನ್ ಕಂಪನಿಯಲ್ಲಿ ದಾಂಧಲೆ ಸಂಭಂದ ಪೊಲೀಸರು 149 ಕಾರ್ಮಿಕರ ವಿರುದ್ದ ದೂರು ದಾಖಲು ಮಾಡಿ ಬಂಧಿಸಿದ್ದು, ಸಿಸಿಟಿವಿ ದೃಶ್ಯ ಆಧರಿಸಿಯೇ ಪ್ರಕರಣ ದಾಖಲು ಮಾಡಿದ್ದೇವೆ, ಅಮಾಯಕರು ಎಂದು ಮನವರಿಕೆಯಾದ ಮೇಲೆ 25 ಮಂದಿಯನ್ನ ವಾಪಾಸ್ ಬಿಟ್ಟಿದ್ದು, ಬಂಧಿತರ ಸಂಖ್ಯೆ ಮತ್ತಷ್ಟು ಹೆಚ್ಚುವ ಸಾಧ್ಯತೆಯಿದೆ, ಎಲ್ಲರನ್ನು ವಿಚಾರಣೆ ಮಾಡಿ ಘಟನೆಯಲ್ಲಿ ಪಾಲ್ಗೊಂಡಿದ್ದಲ್ಲಿ ಮಾತ್ರ ಬಂಧಿಸುವುದಾಗಿ ಕೋಲಾರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಾರ್ತಿಕ್ ರೆಡ್ಡಿ ಹೇಳಿದ್ದಾರೆ. ಸುಮಾರು ನಾಲ್ಕನೂರಕ್ಕೂ ಹೆಚ್ಚು ಮಂದಿಯನ್ನು ಬಂಧಿಸಿದ್ದರು ಇದುವರಿಗೂ ನೂರೈವತ್ತಕ್ಕೂ ಹೆಚ್ಚು ಜನರನ್ನು ಜಿಲ್ಲಾ ನ್ಯಾಯಾಧಿಶರ ಮುಂದೆ ಹಾಜರು ಪಡಿಸಲಾಗಿದೆ.