- ಅಬ್ಬರಿಸಿ ಬೊಬ್ಬಿರಿಯುತ್ತಿರುವ ಕೆರೆಗಳು
- ಕೆರೆಗಳ ಆರ್ಭಟದ ಸದ್ದಿಗೆ ಜನತೆ ಕಂಗಾಲು
- ಹಳ್ಳ ಕೊಳ್ಳಗಳಲ್ಲಿ ಭೊರ್ಗೆರೆತ ನೀರಿನ ಹರಿವು
- ಅಡ್ಡಗಲ್ಲು, ಕೆಂಪರೆಡ್ಡಿಗಾರಿಪಲ್ಲಿ ಕೆರೆಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿವೆ
ಶ್ರೀನಿವಾಸಪುರ:- ತಾಲೂಕಿನಲ್ಲಿ ಎರಡು ದಿನಗಳಿಂದ ಸುರಿಯುತ್ತಿರುವ ಕುಂಭದ್ರೋಣ ಮಳೆಯಿಂದ ರಾಯಲ್ಪಾಡು ಹೋಬಳಿಯ ಬಹುತೇಕ ಕೆರೆಗಳು ಭೊರ್ಗೆರೆಯುತ್ತ ಅಬ್ಬರಿಸುತ್ತಿರುವ ಪರಿಣಾಮ ಹಳ್ಳ ಕೊಳ್ಳಗಳು ತುಂಬಿಹರಿಯುತ್ತಿದ್ದು ಗುರುವಾರ ತಡೆ ಸಂಜೆ ನಡೆದ ಅವಘಡದಲ್ಲಿ ಸೇತುವೆಯೊಂದರ ಮೇಲೆ ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದ ಯುವಕ ಹಾಗು ಮಹಿಳೆ ಸೇತುವೆ ಕುಸಿದು ವಾಹನ ಚಲಾಯಿಸುತ್ತಿದ್ದ ಯುವಕ ಅದೃಷಾವಶಾತ್ ನೀರಿನಿಂದ ತಪ್ಪಿಸಿಕೊಂಡಿದ್ದ ಮಹಿಳೆ ಹಳ್ಳದ ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದರು ಇಂದು ಸುಮಾರು ೧೦೦ ಮೀಟರ್ ದೂರದಲ್ಲಿ ಮಹಿಳೆ ಶವವಾಗಿ ಪತ್ತೆಯಾಗಿದ್ದಾರೆ.
ಹಳ್ಳದ ನೀರಿನಲ್ಲಿ ಕೊಚ್ಚಿಹೋದ ಮಹಿಳೆಯನ್ನು ಎ.ಕೊತ್ತೂರು ಗ್ರಾಮದ ಅಮರಾವತಮ್ಮ (65) ಗುರತಿಸಲಾಗಿದ್ದು ಈಕೆ ತಾಲೂಕಿನ ಪ್ರಮುಖ ರಾಜಕಾರಣಿಯಾಗಿ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಅವರ ಆಪ್ತರಾಗಿದ್ದ ಜಿಲ್ಲಾಪಂಚಾಯಿತಿ ಮಾಜಿ ಸದಸ್ಯ ದಿವಂಗತ ಕೆ.ಎಸ್.ರೆಡ್ದಪ್ಪನವರ ಪತ್ನಿ.
ಗುರುವಾರ ಏಕಾದಶಿ ದೀಪಾವಳಿ ಇದ್ದ ಹಿನ್ನಲೆಯಲ್ಲಿ ಅಮರಾವತಮ್ಮ ತಾನು ವಾಸವಿರುವ ತೋಟದ ಮನೆಯಿಂದ ತನ್ನ ಸ್ವಗ್ರಾಮವಾದ ಎ.ಕೊತ್ತೂರು ಗ್ರಾಮದಲ್ಲಿ ಸಂಧಿಕರ ಮನೆಗೆ ಹಬ್ಬ ಆಚರಿಸಲು ಹೋಗಿ ತೋಟದ ಮನೆಗೆ ವಾಪಸ್ಸು ಬರಲು ಪರಿಚಯಸ್ಥ ಯುವಕನ ದ್ವಿಚಕ್ರವಾಹನದಲ್ಲಿ ಹೋಗುತ್ತಿರಬೇಕಾದ ಸಂದರ್ಭದಲ್ಲಿ ದೊಡ್ಡಹಳ್ಳದ ಸೇತುವೆ ದಾಟುವಾಗ ಸೇತುವೆ ಕುಸಿದು ಬಿದ್ದಿದೆ ಸೇತುವೆ ಮೇಲಿದ್ದ ಇಬ್ಬರು ಬೈಕ್ ಸಮೇತ ಹಳ್ಳದಲ್ಲಿ ಬಿದ್ದಿರುತ್ತಾರೆ ಕತ್ತಲಲ್ಲಿ ಯುವಕ ಪ್ರಯಾಸ ಪಟ್ಟು ಈಜಿಕೊಂಡು ಪ್ರಾಣಪಯದಿಂದ ಪಾರಾಗಿದ್ದು ಮಹಿಳೆ ಹಾಗು ಬೈಕ್ ನೀರಿನಲ್ಲಿ ಕೊಚ್ಚಿಹೋಗಿದ್ದು ಕತ್ತಲು ಹಾಗು ಮಳೆಯಿಂದಾಗಿ ರಾತ್ರಿ ಹುಡುಕಲು ಸಾಧ್ಯವಾಗದ ಹಿನ್ನಲೆಯಲ್ಲಿ ಇಂದು ರಾಯಲ್ಪಾಡು ಪೊಲೀಸರು ಹಾಗು, ಅಗ್ನಿಶಾಮಕ ದಳ ಸಿಬ್ಬಂದಿ ಹುಡುಕಾಟ ನಡೆಸಿದ್ದು ಮಹಿಳೆಯ ತೋಟದ ಮನೆಯಿಂದ ಸುಮಾರು 100 ಮಿ.ದೂರದಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.