ಶ್ರೀನಿವಾಸಪುರ: ಪೇ ಸಿ ಎಂ (PYA CM) ಅಂದ್ರೆ ಪೇ ಟೂ ಕಾಂಗ್ರೆಸ್ ಮೇಡಂ (PAY TO CONGRESS MADAMA) ಎಂದು ಕಾಂಗ್ರೆಸ್ ಮುಖಂಡರ ವಿರುದ್ದ ವಿಧಾನಪರಿಷತ್ ಮುಖ್ಯ ಸಚೇತಕ ಯೈ.ಎ.ನಾರಯಣಸ್ವಾಮಿ ಹೇಳಿದರು. ಅವರು ಶ್ರೀನಿವಾಸಪುರ ತಾಲೂಕಿನ ಯಚ್ಚನಹಳ್ಳಿಯಲ್ಲಿ ಗ್ರಾಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ
ಕಾಂಗ್ರೆಸ್ ನವರು 57 ವರ್ಷಗಳಿಂದ ಖಜಾನೆಯನ್ನು ಲೂಠಿ ಮಾಡಿ ಜೇಬು ತುಂಬಿಸಿಕೊಂಡು ಹಣವನ್ನು ಹೈಕಮಾಂಡ್ ಖಜಾನೆ ತುಂಬಿಸುವ ಕೆಲಸ ಮಾಡಿದ್ದಾರೆ ಹಲವಾರು ಯೋಜನೆಗಳಲ್ಲಿ 100 ರೂಪಾಯಿ ಸ್ಕಿಂ ನಲ್ಲಿ 15 ರೂಪಾಯಿ ಮಾತ್ರ ಗ್ರಾಮೀಣ ಜನತೆಗೆ ಸಿಗುತಿತ್ತು ಎಂದು ಮಾಜಿ ಪ್ರಧಾನಿ ರಾಜೀವ್ ಗಾಂಧಿಯೇ ಹೇಳಿಕೆ ನೀಡಿದ್ದರು,ಇತ್ತಿಚಿಗೆ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಕಾರ್ಯಕ್ರಮವೊಂದರಲ್ಲಿ 4 ತಲೆಮಾರಿಗೆ ಆಗುವಷ್ಟು ಮಾಡಿಕೊಂಡದ್ದಿವೆ ಎಂದು ಬಹಿರಂಗವಾಗಿಯೇ ಹೇಳಿದ್ದಾರೆ ಜನತೆಯೇ ತಿರ್ಮಾನ ಮಾಡಬೇಕು ಯಾವ ಪಕ್ಷದವರು ಹೇಗೆ ಕಮಿಷನ್ ತಗೊಂಡು ದುಡ್ಡು ಮಾಡಿದ್ದಾರೆ ಅನ್ನುವುದನ್ನು ಅವರೇ ಒಪ್ಪಿಕೊಂಡಿದ್ದಾರೆ ಇಂತಹವರು ಜನಸಾಮಾನ್ಯ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ವಿರುದ್ದ ಕೀಳು ಮಟ್ಟದ ಆರೋಪ ಮಾಡುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಕಾಂಗ್ರೆಸ್ ನವರು ಹಲವಾರು ಪ್ರಕರಣಗಳಲ್ಲಿ ಜೈಲಿಗೆ ಹೋಗಿ ಬಂದಿದ್ದಾರೆ ಹಲವಾರು ವಿಚಾರಗಳನ್ನು ಇಟ್ಟುಕೊಂಡು ಅವರ ವಿರುದ್ದ ಭಿತ್ತಿಪತ್ರ ಅಂತಿಸುವುದು ದೊಡ್ಡದಲ್ಲ ಎಂದು ಎಚ್ಚರಿಸಿದರು.
ವಿಧಾನಸಭೆ ಮತ್ತು ಪರಿಷತ್ತಿನಲ್ಲಿ ಕಾಂಗ್ರೆಸ್ ಪಕ್ಷದ ಆರೋಪಗಳಿಗೆ ಸಮರ್ಥವಾಗಿ ಉತ್ತರ ನೀಡಿದ್ದೇವೆ ಅದನ್ನು ಅರಗಿಸಿಕೊಳ್ಳಲು ಸಾದ್ಯವಾಗದ ಕಾಂಗ್ರೆಸ್ ಅನವಶ್ಯವಾದ ಅಪಪ್ರಚಾರ ಮಾಡುತ್ತಿದೆ ಎಂದರು.
ಕಾಂಗ್ರೆಸ್ ಸಾಧನೆ! ಕಾಂಗ್ರೆಸ್ ಭ್ರಷ್ಟಾಚಾರ,ಕೋಮುವಾದ,ಉಗ್ರವಾದಕ್ಕೆ ಬೆಂಬಲ ಕೊಟ್ಟಿದ್ದೆ ಅದರ ಸಾಧನೆ ಇತ್ತಿಚಿಗೆ ಪಿ.ಎಫ್.ಐ ಸಂಘಟನೆ ಮೇಲೆ ದಾಳಿ ಮಾಡಿದರೆ ಪಾಕಿಸ್ತಾನಕ್ಕೆ ಜೈ ಕಾರ ಹಾಕಿಕೊಂಡು ಪ್ರತಿಭಟನೆ ಮಾಡುತ್ತಾರೆ ಎಂದು ಕೋಮುವಾದವನ್ನು ಬೆಂಬಲಿಸುವ ಸಂಘಟನೆಗಳ ವಿರುದ್ದ ಅಸಮಧಾನ ಹೊರಹಾಕಿದ ಅವರು ಕಾಂಗ್ರೆಸ್ ಅಲ್ಪಸಂಖ್ಯಾತರ ಒಲೈಕೆ ಮಾಡುವ ಮೂಲಕ ದೇಶದಲ್ಲಿ ಆಂತರಿಕ ಕಲಹ ಸೃಷ್ಟಿಸುತ್ತಿದೆ ಎಂದು ಆಪಾಧಿಸಿದರು. ಶ್ರೀನಿವಾಸಪುರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವಿಚಾರದಲ್ಲಿ ಪಕ್ಷದ ಹಿರಿಯರ ಮಾತು,ಹೈಕಮಾಂಡ್ ತಿರ್ಮಾನವೆ ಅಂತಿಮ ಎಂದು ಮಾರ್ಮಿಕವಾಗಿ ನುಡಿದರು