ಶ್ರೀನಿವಾಸಪುರ:ಗಂಗಾ ಕಲ್ಯಾಣ ಯೋಜನೆಯ ಸಮಿತಿಗೆ ಆಯಾ ಜಿಲ್ಲೆಯ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಪ್ರಗತಿ ಪರಿಶೀಲನೆ ನಡೆಸಬೇಕಾಗಿತ್ತು, ಆದರೆ ಇಷ್ಟು ವರ್ಷಗಳಿಂದ ಇದುವರೆವಿಗೂ ಒಂದು ಜಿಲ್ಲೆಯಲ್ಲಿಯೂ ಪ್ರಗತಿ ಪರಿಶೀಲನೆ ನಡೆಸಿರಲಿಲ್ಲ ನಾನು ಗಂಗಾ ಕಲ್ಯಾಣ ಯೋಜನೆಯ ಸದನ ಸಮಿತಿಯ ಅಧ್ಯಕ್ಷನಾದ ನಂತರ ಪ್ರತಿ ಜಿಲ್ಲೆಯಲ್ಲಿಯೂ ಪ್ರಗತಿ ಪರಿಶೀಲನಾ ಸಭೆಗಳನ್ನು ನಡೆಸಿ ಯೋಜನೆಯಲ್ಲಿ ಆಗಿದ್ದ ಲೋಪಗಳನ್ನು ಎತ್ತಿ ಹಿಡಿದು ಸರ್ಕಾರಕ್ಕೆ ವರದಿ ಸಲ್ಲಿಸಿ ಸರಿಪಡಿಸುವ ಕೆಲಸ ಮಾಡಿರುವುದಾಗಿ ವಿಧಾನ ಪರಿಷತ್ ಮುಖ್ಯ ಸಚೇತಕ ವೈ.ಎ ನಾರಾಯಣಸ್ವಾಮಿ ತಿಳಿಸಿದರು.
ಶ್ರೀನಿವಾಸಪುರ ತಾಲ್ಲೂಕಿನ ಅವರ ಸ್ವಗ್ರಾಮವಾದ ಯಚ್ಚನಹಳ್ಳಿ ಗ್ರಾಮದಿಂದ ಕಂಬಾಲಪಲ್ಲಿ ಗ್ರಾಮಕ್ಕೆ 50 ಲಕ್ಷ ವೆಚ್ಚದಲ್ಲಿ ಸಂಪರ್ಕ ರಸ್ತೆ ನಿರ್ಮಾಣಕ್ಕೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದರು.
ಸ್ವತಂತ್ರ ಬಂದು 75 ವರ್ಷಗಳಾದರೂ ಯಚ್ಚನಹಳ್ಳಿ ಮತ್ತು ಕಂಬಾಲಪಲ್ಲಿಗೆ ಸಂಪರ್ಕ ರಸ್ತೆ ಇರಲಿಲ್ಲ ಕಾಲುದಾರಿಯ ಪ್ರಯಾಣ ಇತ್ತು, ಕಂದಾಯ ಇಲಾಖೆಯಿಂದ ಸರ್ವೇ ಮಾಡಿಸಿ ರಸ್ತೆ ನಿರ್ಮಾಣಕ್ಕೆ ಬಿಜೆಪಿ ಸರ್ಕಾರದಿಂದ ಹಣಮಂಜೂರು ಮಾಡಿಸಲಾಗಿದೆ ಈ ರಸ್ತೆ ನಿರ್ಮಾಣವಾದರೆ ಈ ಭಾಗಗಳಲ್ಲಿನ ರೈತರ ಕೃಷಿ ಚಟುವಟಿಕೆಗಳಿಗೆ ಮತ್ತು ಮಾವಿನ ತೋಟಗಳಿಗೆ ರೈತರು ಓಡಾಡಲು ಅನುಕೂಲವಾಗುತ್ತದೆ.
ಅಂಬೇಡ್ಕರ್ ನಿಗಮದಿಂದ ನೇರ ಸಾಲದ ಅಡಿಯಲ್ಲಿ ಯಚ್ಚನಹಳ್ಳಿ ಗ್ರಾಮದ 11 ಜನ ಹೆಣ್ಣು ಮಕ್ಕಳಿಗೆ ತಲಾ 50 ಸಾವಿರ ರೂಗಳ ಸಾಲ ನೀಡಲಾಗಿದೆ, ತಾಲ್ಲೂಕಿನಲ್ಲಿ ಸಮಾಜ ಕಲ್ಯಾಣ ಅಡಿಯಲ್ಲಿ ಬರುವ ಎಲ್ಲಾ ನಿಗಮಗಳ ಜೊತೆಗೆ ಅಲ್ಪ ಸಂಖ್ಯಾತ, ದೇವರಾಜ ಅರಸು ಅಡಿಯಲ್ಲಿ ಬರುವ ಎಲ್ಲಾ ಸೌಲತ್ತುಗಳನ್ನು ನಮ್ಮ ತಾಲ್ಲೂಕಿಗೆ ಕೊಡಿಸಲು ಪ್ರಸ್ತಾವನೆಯನ್ನು ಸಿದ್ದಪಡಿಸಿರುತ್ತೇನೆ, ಗಂಗಾ ಕಲ್ಯಾಣ ಯೋಜನೆ, ನೇರ ಸಾಲ, ಮೋಟಾರ್ ವೆಹಿಕಲ್ ಸಾಲ, ಐರಾವತ ಸಾಲಗಳು, ರೈತರಿಗೆ ಬೇಕಾಗುವ ಸೌಲಭ್ಯಗಳು ಒಂದು ತಿಂಗಳೊಳಗೆ ಫಲಾನುಭವಿಗಳನ್ನು ಸೇರಿಸಿ ಸವಲತ್ತು ವಿತರಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುವುದು ಎಂದರು.
ಗಂಗಾ ಕಲ್ಯಾಣ ಯೋಜನೆಯ ಸಮಿತಿಯ ಅಧ್ಯಕ್ಷನಾಗಿ ಶ್ರೀನಿವಾಸಪುರ ತಾಲ್ಲೂಕಿಗೆ ಸಮಿತಿಯನ್ನು ಕರೆತಂದು ದಶಕಗಳ ಹಿಂದೆ ಕೊರೆಸಲಾಗಿದ್ದ ಕೊಳವೆ ಬಾವಿಗಳಿಗೆ ಮೋಟಾರ್ ಪೈಪ್ಗಳನ್ನು ಕೊಟ್ಟಿರಲಿಲ್ಲ ಅವುಗಳನ್ನು ಫಲಾನುಭವಿಗಳಿಗೆ ವಿತರಿಸುವ ಕೆಲಸ ಮಾಡಿದ್ದೇನೆ. ಮತ್ತು 2015 ಮತ್ತು 2016 ನೇ ಇಸವಿಯಲ್ಲಿ ಆಯ್ಕೆಯಾಗಿ ಅನುಮೋದನೆಯಾಗಿದ್ದ ಕೊಳವೆ ಬಾವಿಗಳನ್ನು ಕೊರಿಸಿರಲಿಲ್ಲ, ಈಗ ಕೊರಿಸುವ ಕೆಲಸವನ್ನು ಮಾಡಿದ್ದೇನೆ ಇಡೀ ಕೋಲಾರ ಜಿಲ್ಲೆಯಲ್ಲಿ ದಲಿತರಿಗಾಗಿ, ಹಿಂದುಳಿದವರಿಗಾಗಿ, ಅಲ್ಪ ಸಂಖ್ಯಾತರಿಗಾಗಿ ಏನೇನು ಸೌಲಭ್ಯಗಳು ಕೊಡಬೇಕಾಗಿತ್ತೋ ಆ ಸೌಲಭ್ಯಗಳನ್ನು ಬಿಜೆಪಿ ಸರ್ಕಾರದಿಂದ ಕೊಡಿಸುತ್ತಿರುವುದಾಗಿ ಹೇಳಿದರು.
ಸದನ ಸಮಿತಿ ಅಧ್ಯಕ್ಷನಾಗಿ ಗಂಗಾ ಕಲ್ಯಾಣ ಯೋಜನೆ ಅಕ್ರಮ ತಡೆದಿದ್ದಿನಿ
ನನ್ನನ್ನು ಸದನ ಸಮಿತಿಗೆ ಅಧ್ಯಕ್ಷರನ್ನಾಗಿ ಮಾಡಿದ್ದಕ್ಕೆ ಸರ್ಕಾರಕ್ಕೆ ಕೃತಜ್ಞತೆಗಳನ್ನು ಸಲ್ಲಿಸಿ ಇನ್ನು ಮುಂದೆಯೂ ಶೋಷಿತರ, ಧಮನಿತರ ಪರ, ಧ್ವನಿಯಿಲ್ಲದವರ ಪರ ಕೆಲಸ ಮಾಡುವುದಾಗಿ ಕೋಲಾರ ಜಿಲ್ಲೆಯಲ್ಲಿ ಗಂಗಾ ಕಲ್ಯಾಣ ಯೋಜನೆಯಲ್ಲಿ ಫಲಾನುಭವಿಗಳು ಆಯ್ಕೆಯಾಗಿದ್ದರೂ ಫಲಾನುಭವಿಗಳಿಂದ ಕೊಳವೆ ಬಾವಿ ಕೊರಿಸಲು 25 ಸಾವಿರ ರೂ.ಗಳನ್ನು ತೆಗೆದುಕೊಳ್ಳುತ್ತಿದ್ದರು. ಪಂಪ್ ಮೋಟರ್ ಖರೀದಿ ಹಾಗೇ ಹಂಚಿಕೆಯಲ್ಲೂ ಗೋಲ್ ಮಾಲ್ ನಡೆಯುತಿತ್ತು ಸರ್ವೇ ನಂಬರ್ ತೋರಿಸುವುದು ಒಬ್ಬರದು ಬೋರ್ ವೆಲ್ ಕೊರಿಸುವುದು ಬೇರೆಯವರ ಸರ್ವೇ ನಂಬರ್ನಲ್ಲಿ ಈ ರೀತಿ ಬಹಳಷ್ಟಯ ಅವ್ಯವಹಾರಗಳು ಇತ್ತು ಅವುಗಳನ್ನು ಸರಿಪಡಿಸಿ ಅರ್ಹಫಲಾನುಭವಿಗಳಿಗೆ ಅನ್ಯಾಯವಾಗದಂತೆ ನ್ಯಾಯ ಒದಗಿಸಿಕೊಡುವ ಕೆಲಸ ನಾನು ಮಾಡಿದ್ದು ಕೋಲಾರ ಜಿಲ್ಲೆಯಲ್ಲಿ 182 ಕೊಳವೆ ಬಾವಿಗಳಿಗೆ ವಿದ್ಯುತ್ ನೀಡಿರಲಿಲ್ಲ, ಎರಡನ್ನು ಬಿಟ್ಟು 180 ಕೊಳವೆ ಬಾವಿಗಳಿಗೆ ವಿದ್ಯುತ್ ಸಂಪರ್ಕ ಕೊಡಿಸುವ ಕೆಲಸ ಮಾಡಿದ್ದೇನೆ, ಇದರ ಜೊತೆಗೆ ಇಡೀ ರಾಜ್ಯಾದ್ಯಂತ ಆಯಾ ಜಿಲ್ಲೆಯ ಸಿಇಓ ಗಳ ನೇತೃತ್ವದ ಸಮಿತಿಗಳನ್ನು ಚುರುಗೊಳಿಸಿ ಅಕ್ರಮಗಳನ್ನು ತಡೆಗಟ್ಟುವ ಕೆಲಸ ಮಾಡಿದ್ದೇನೆ ಎಂದರು.
ಈ ಸಂದರ್ಭದಲ್ಲಿ ಇಂಜಿನಿಯರ್ ಅನ್ವರ್,ತಾಲೂಕಿ ಬಿಜೆಪಿ ಅಧ್ಯಕ್ಷ ಅಶೋಕ್ ರೆಡ್ದಿ,ಯಚ್ಚನಹಳ್ಳಿ ರಮೇಶ್, ನಾರಾಯಣಗೌಡ, ನಾರಾಯಣಸ್ವಾಮಿ, ಕೆ.ಕೆ ಮಂಜು, ರತ್ನಪ್ಪ, ಪ್ಲೆಕ್ಸ್ ನಾರಾಯಣಸ್ವಾಮಿ, ಮಂಜುನಾಥ್ ಯಚ್ಚನಹಳ್ಳಿ ಮತ್ತು ಕಂಬಾಲಪಲ್ಲಿ ಗ್ರಾಮಸ್ಥರು ಇದ್ದರು.