- ಕರ್ನಾಟಕ ರಾಜಕೀಯದ ಬಗ್ಗೆ ಉಪಾಪೋಹಗಳದೆ ಕಾರುಬಾರು
- ಗಂಟೆಗೊಂದು ಗಳಿಗೆಗೊಂದು ಸುದ್ದಿಗಳು ಹೊರಬರುತ್ತಿವೆ
- ಬದಲಾಗುತ್ತಿರುವ ಕರ್ನಾಟಕದ ರಾಜಕೀಯ ಪರಿಸ್ಥಿತಿಗಳು
ನ್ಯೂಜ್ ಡೆಸ್ಕ್:ಕರ್ನಾಟಕದ ರಾಜಕೀಯದಲ್ಲಿ ಅನಿರೀಕ್ಷಿತ ರಾಜಕೀಯ ಬೆಳವಣಿಗೆಗಳು ನಡೆಯುತ್ತಿವೆ. ಮುಖ್ಯಮಂತ್ರಿಯನ್ನು ಬದಲಾಯಿಸಲಾಗುವುದು ಎಂಬ ಉಹಾಪೋಹ ಸುದ್ದಿಗಳಿಗೆ ರೆಕ್ಕೆ ಪುಕ್ಕ ಬಂದು ಕರ್ನಾಟಕದ ರಾಜಕೀಯ ಪಡಸಾಲೆಯಲ್ಲಿ ತೆಲುತ್ತಿವೆ.
ಈ ತಿಂಗಳ 26 ರಂದು ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರದ ಎರಡು ವರ್ಷಗಳು ಪೂರ್ಣಗೊಳ್ಳುತ್ತದೆ ಅದಕ್ಕಾಗಿ 25 ರಂದು ಪಕ್ಷದ ಶಾಸಕರು ಮತ್ತು ಮಂತ್ರಿಗಳಿಗೆ ಸಿಎಂ ಯಡಿಯೂರಪ್ಪ.ಬಾರಿ ಪ್ರಮಾಣದ ಭೋಜನ ಕೂಟ ಎರ್ಪಡಿಸಿದ್ದರು ಆದರೆ ಬದಲಾದ ಸನ್ನಿವೇಶದ ಹಿನ್ನಲೆಯಲ್ಲಿ ಭೋಜನ ಕೂಟದ ಬದಲಾಗಿ ಎರಡು ವರ್ಷಗಳ ಸಾಧನೆಯನ್ನು ನಾಡಿನ ಜನತೆಗೆ ತಲುಪಿಸಲು 26 ರಂದು ಸೋಮವಾರ ‘ಸಾಧನಾ’ ಎಂಬ ಕಾರ್ಯಕ್ರಮವನ್ನು ವಿಧಾನಸೌದದ ಬ್ಯಾಂಕ್ವಿಟ್ ಸಭಾಂಗಣದಲ್ಲಿ ಸರಳವಾಗಿ ಆಯೋಜಿಸಲಾಗಿದೆ ಎಂದು ಸರ್ಕಾರದ ಮುಖ್ಯ ಸಚೇತಕ ಸುನಿಲ್ ಕುಮಾರ್ ಹೇಳಿರುವುದಾಗಿ ತಿಳಿದುಬಂದಿದೆ.
ಈ ನಡುವೆ ಸಚಿವ ಶ್ರೀರಾಮ್ ಅವರನ್ನು ಬಿಜೆಪಿ ಹೈಕಮಾಂಡ್ ದೆಹಲಿಗೆ ಬರಲು ಹೇಳಿದೆ, ಈ ಎಲ್ಲಾ ಬೆಳವಣಿಗೆಗಳ ಹಿನ್ನಲೆಯಲ್ಲಿ ಈ ತಿಂಗಳ 26 ರ ನಂತರ ಸಿಎಂ ಬದಲಾವಣೆ ಆಗುವ ಸನ್ನಿಹಿತವಾಗಿದೆ ಎಂಬ ಆತಂಕ ಶಾಸಕರು ಹಾಗು ಮಂತ್ರಿಗಳಿಗೆ ಕಾಡಲು ಶುರುವಾಗಿದಿಯಂತೆ ಮತ್ತೊಂದು ಬೆಳವಣಿಗೆಯಲ್ಲಿ ಗುಜರಾತ್ ಪ್ರವಾಸದಲ್ಲಿರುವ ಸಚಿವ ಜಗದೀಶ್ ಶೆಟ್ಟರ್ ತರಾತುರಿಯಲ್ಲಿ ದೆಹಲಿಗೆ ಹೋಗಿ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಭೇಟಿಯಾದರು ಎಂಬ ಸುದ್ದಿ ಇದೆ ಸಿಎಂ ರಾಜಕೀಯ ಕಾರ್ಯದರ್ಶಿ ಶಾಸಕ ರೇಣುಕಾಚಾರ್ಯ ಸಹ ದೆಹಲಿಯಲ್ಲೇ ಇದ್ದಾರಂತೆ.
ನಾನು ಯಾರ ಹೆಸರು ಪ್ರಸ್ತಾಪಿಸಲ್ಲ ಯಡಿಯೂರಪ್ಪ.
ಎರಡು ಮೂರು ದಿನಗಳಲ್ಲಿ ಯಡಿಯೂರಪ್ಪ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದಾರೆ ಎಂಬ ಸುದ್ದಿಗೆ ಸಿ.ಎಂ ಪ್ರತಿಕ್ರಿಯೆ ನೀಡಿದ್ದು ರಾಜೀನಾಮೆ ನೀಡುವಂತೆ ಯಾರೂ ಕೇಳಿಲ್ಲ ಒತ್ತಡ ಸಹ ಹಾಕಿಲ್ಲ ಎಂದು ಅವರು ಹೇಳಿದರು. ಬಿಜೆಪಿ ಹೈಕಮಾಂಡ್ ರಾಜೀನಾಮೆ ನೀಡುವಂತೆ ಆದೇಶಿಸಿದರೆ ತಕ್ಷಣ ರಾಜೀನಾಮೆ ನೀಡಲು ಸಿದ್ದ ಎಂದ ಅವರು ಮುಂದಿನ ದಿನಗಳಲ್ಲಿ ಪಕ್ಷದ ಸಂಘಟನೆಯಲ್ಲಿ ತೊಡಗಿಸಿಕೊಳ್ಳುವುದಾಗಿ ಹೇಳಿರುತ್ತಾರೆ. ಮುಖ್ಯಮಂತ್ರಿ ಯಾರ ಹೆಸರನ್ನೂ ನಾನು ಪ್ರಪೋಸ್ ಮಾಡಿಲ್ಲ ಮಾಡುವುದು ಇಲ್ಲ ಎಂದ ಅವರು ಬಿಜೆಪಿ ಹೈಕಮಾಂಡ್ ಯಾವುದೇ ಒತ್ತಡ ಇದುವರಿಗೂ ನನ್ನ ಮೇಲೆ ಹೇರಿಲ್ಲ ಸ್ಪಷ್ಟಪಡಿಸಿದರು ಜುಲೈ 26 ರಂದು ಏನಾಗಲಿದೆ ಎಂಬುದನ್ನು ನೀವೇ ನೋಡಲಿದ್ದಿರಾ ಎಂದು ಯಡಿಯೂರಪ್ಪ ಮಾರ್ಮಿಕವಾಗಿ ಹೇಳಿದ್ದಾರಂತೆ.
ಹೋಮ ಹವನ ಮೊರೆ ಹೋದ CM
ರಾಜ್ಯ ಬಿಜೆಪಿಯಲ್ಲಿ ನಾಯಕತ್ವ ಬದಲಾವಣೆಯ ಮಾತುಗಳು ಜೋರಾಗಿ ಕೇಳಿಬರುತ್ತಿದೆ ಮುಖ್ಯಮಂತ್ರಿ ಪದತ್ಯಾಗದ ಬದಲಾವಣೆ ಎಂಬೆಲ್ಲ ಊಹಾಪೋಹಗಳ ಮಧ್ಯೆ ಗುರುವಾರ ಮುಖ್ಯಮಂತ್ರಿಗಳು ಧನ್ವಂತರಿ ಹೋಮದಲ್ಲಿ ಪಾಲ್ಗೋಂಡಿದ್ದಾರೆ.
ಬೆಂಗಳೂರಿನ ನಗರದ ಕಾಚರಕನಹಳ್ಳಿಯ ಶ್ರೀ ಕೋದಂಡರಾಮ ಸ್ವಾಮಿ ದೇವಸ್ಥಾನದಲ್ಲಿ ವಿಶ್ವ ಹಿಂದೂ ಪರಿಷತ್ ಏರ್ಪಡಿಸಿದ್ದ ಶ್ರೀ ಧನ್ವಂತರಿ ಹೋಮದಲ್ಲಿ ಯಡಿಯೂರಪ್ಪ ಭಾಗಿಯಾಗಿ ಗೋಪೂಜೆಯನ್ನು ಮಾಡಿರುತ್ತಾರೆ. ಮುಖ್ಯಮಂತ್ರಿಗಳೊಂದಿಗೆ ಕೆಲವು ಮಠಾಧೀಶರು, ಶಾಸಕರು ಸಹ ಇದ್ದರಂತೆ.
ಕೊರೋನಾ ನಿಯಂತ್ರಣಕ್ಕಾಗಿ ಲೋಕ ಕಲ್ಯಾಣದ ಹೆಸರಲ್ಲಿ ಹೋಮವನ್ನು ನಡೆಸಲಾಯಿತು ಎಂದು ಹೇಳಲಾಗಿದೆ.
ವರದಿ: ಚ.ಶ್ರೀನಿವಾಸಮೂರ್ತಿ