ಶ್ರೀನಿವಾಸಪುರ:ಯೋಗ ವಿಙ್ಞಾನ ಭಾರತದ ಮೂಲಪರಂಪರೆ ಇದನ್ನು ದೇವಾನುದೇವತೆಗಳಿಂದ ಅನುಗ್ರಹ ಪಡೆದ ಋಷಿ ಮುನಿಗಳು ವಿಶ್ವಕ್ಕೆ ಕೊಡುಗೆಯಾಗಿ ನೀಡಿದ್ದಾರೆ ಎಂದು ಯೋಗ ಶಿಕ್ಷಕ ವೆಂಕಟೇಶ್ ಬಾಬು ಹೇಳಿದರು ಅವರು ಇಂದು ವಿಶ್ವ ಯೋಗ ದಿನಾಚರಣೆ ಅಂಗವಾಗಿ ಶ್ರೀ ಪತಂಜಲಿ ಮುದ್ರಾ ಯೋಗ ಶಿಕ್ಷಣ ಸಮಿತಿ ವತಿಯಿಂದ ಪಟ್ಟಣದ ಪುರಸಭೆ ಸಭಾಂಗಣದಲ್ಲಿ ಆಯೋಜಿಸಿದ್ದ ಸಾಮೂಹಿಕ ಯೋಗಭ್ಯಾಸ ಉದ್ಘಾಟಿಸಿ ಮಾತನಾಡಿದರು.
ಇಂದು ಇಡಿ ವಿಶ್ವದಲ್ಲಿ ಜನತೆ ಭಾರತ ಯೋಗಾಭ್ಯಸವನ್ನು ಅರಿಯಲು ಮುಂದಾಗಿ ತಮ್ಮ ಜೀವನದಲ್ಲಿ ಆಳವಡಿಸಿಕೊಂಡು ಉತ್ತಮ ಆರೋಗ್ಯ ಪಡೆಯಲು ಮುಂದಾಗಿದೆ ಎಂದರು.
ಕಾರ್ಯಕ್ರಮದ ವಿಶೇಷ ಅತಿಥಿಗಳಾಗಿದ್ದ ಪುರಸಭೆ ಮುಖ್ಯಾಧಿಕಾರಿ ಸತ್ಯನಾರಾಯಣ ಮಾತನಾಡಿ ವಿಶ್ವದ ಹಲವಾರು ದೇಶಗಳು ಭಾರತದ ನೇತೃತ್ವದಲ್ಲಿ ಒಂದೇ ಕುಟುಂಬದಂತೆ ಇಂದು ಯೋಗ ದಿನಾಚರಣೆ ಆಚರಣೆ ಮಾಡುತ್ತಿರುವುದು ಭಾರತೀಯರಾದ ನಮ್ಮೆಲ್ಲರಿಗೂ ಖುಷಿ ವಿಚಾರ, ನಾವೇಲ್ಲರು ಉತ್ತಮ ಆರೋಗ್ಯಕ್ಕಾಗಿ ನಿತ್ಯ ಯೋಗ ಮಾಡಿ 20 ವರ್ಷಗಳ ಹಿಂದಿನ ಆಹಾರ ಕ್ರಮ ಅನುಸರಿಸಿ,ವಿದೇಶಿ ಆಹಾರ ಪದ್ದತಿ ತಿರಸ್ಕರಿಸಿ ಬದುಕು ಹಸನಾಗಿಸಿಕೊಳ್ಳೊಣ,ನಮ್ಮ ಸುಮುತ್ತಲಿನ ಪರಿಸರವನ್ನು ಸ್ವಚ್ಛವಾಗಿರಿಸುವ ಮೂಲಕ ಪರಿಸರದ ಸ್ವಾಸ್ಥವನ್ನು ಕಾಪಾಡಲು ಮುಂದಾಗಿ ಹಾಗೆ ನೀರು ಅಮೂಲ್ಯ ಅದನ್ನು ಮಿತವಾಗಿ ಬಳಸಿ
ಎಂದರು.ಪ್ರತಿ ಮಾನವನ ನಿತ್ಯದ ಬದುಕಿನಲ್ಲಿ ಪ್ಲಾಸ್ಟಿಕ್ ಕವರ್ ಬಳಸುವುದನ್ನು ಸ್ವಯಂ ಪ್ರೇರಿತರಾಗಿ ತಡೆಯೋಣ ಎಂದರು.
ಕಾರ್ಯಕ್ರಮದಲ್ಲಿ ಹಿರಿಯ ಯೋಗಬಂಧು ನರಸಿಂಹರೆಡ್ಡಿ,ನಿವೃತ್ತ ಡೆಪ್ಯೂಟಿ ತಹಶೀಲ್ದಾರ್ ಜಯರಾಮ್,ಉಪನ್ಯಾಸಕರಾದ ಶಂಕರೇಗೌಡ, ಲಕ್ಷ್ಮಣರೆಡ್ಡಿ, ಶಿಕ್ಷಕರಾದ ಚಂದ್ರಣ್ಣ,ಪದ್ಮ,ಲಕ್ಷ್ಮಿ,ಭಾಗ್ಯಮ್ಮ,ಶ್ರೀನಿವಾಸನ್,ಡಿಷ್ ನಾರಾಯಣಸ್ವಾಮಿ,ಪಾರ್ವತಮ್ಮ , ಶಿವರಾಜ್,ಪ್ರದೀಪ್ ಮುಂತಾದವರು ಇದ್ದರು.
ಎಲ್.ಐ.ಸಿ. ಯಿಂದ ಯೋಗಾದಿನ ಜಾಗೃತಿ ಮೆರವಣಿಗೆ.
ವಿಶ್ವ ಯೋಗ ದಿನಾಚರಣೆ ಅಂಗವಾಗಿ ಎಲ್.ಐ.ಸಿ ಶ್ರೀನಿವಾಸಪುರ ಶಾಖೆ ವತಿಯಿಂದ ಜಾಗೃತಿ ಮೆರವಣಿಗೆ ಅಚರಿಸಲಾಯಿತು ಯೋಗಾಭ್ಯಾಸವನ್ನು ಜೀವನದಲ್ಲಿ ಅಳವಡಿಸಿಕೊಂಡು ಆರೋಗ್ಯವಂತರಾಗಿ ಜೀವಿಸಿ ಎಂದು ಘೋಷಣೆಗಳನ್ನು ಕೂಗುತ್ತ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿದರು. ಈ ಸಂದರ್ಭದಲ್ಲಿ ಶಾಖಾಧಿಕಾರಿ ಪ್ರಸಾದ್ ಅಭಿವೃದ್ಧಿ ಅಧಿಕಾರಿಗಳಾದ ರವಿ ಕುಲಕರ್ಣಿ, ಬಾಲಚಂದ್ರ, ಶ್ರೀನಿವಾಸ್,ಲಕ್ಷ್ಮಣ ಪ್ರತಿನಿಧಿಗಳು ಶಾಖೆಯ ಸಿಬ್ಬಂದಿ ಭಾಗವಹಿಸಿದ್ದರು