ಕೋಲಾರ ತಾಲೂಕು ವಕ್ಕಲೇರಿ ಗ್ರಾಮದಲ್ಲಿ ಸರ್ಕಾರಿ ಆಸ್ಪತ್ರೆ ಇದ್ದರು ಇಲ್ಲಿಗೆ ಸರಿಯಾಗಿ ವೈದ್ಯರು ಬರುತ್ತಿಲ್ಲ, ಇಲ್ಲಿರುವ ಆಂಬ್ಯುಲೆನ್ಸ್ ಕಾರ್ಯನಿರ್ವಹಿಸುತ್ತಿಲ್ಲ ಹೀಗಾಗಿ ಈ ಭಾಗದ ಜನತೆ ಆರೋಗ್ಯ ಸೇವೆ ಪಡೆಯಲು ಖಾಸಗಿ ಆಸ್ಪತ್ರೆ ವೈದ್ಯರ ಪಡೆಯುತ್ತಾರೆ ಹಾಗೆ ಪಡೆದ ಯುವಕ ಇಂಜೆಕ್ಷನ್ ಪಡೆದ ಕೆಲ ಹೊತ್ತಿಗೆ ಜೀವ ಬಿಟ್ಟ ಘಟನೆ ನಡೆದಿರುತ್ತದೆ.
ಕೋಲಾರ:ಕೋಲಾರ:ವೈದ್ಯರು ಇಂಜೆಕ್ಷನ್ ನೀಡಿದ ಕೇಲ ಹೊತ್ತಿಗೆ ಯುವಕನೊಬ್ಬ ಮೃತ ಪಟ್ಟಿರುವ ಘಟನೆ ಕೋಲಾರ ತಾಲೂಕು ವಕ್ಕಲೇರಿಯಲ್ಲಿ ನಡೆದಿದೆ ಮೃತ ಯುವಕನನ್ನು ನಾಗೇಂದ್ರ (23) ಎನ್ನಲಾಗಿದ್ದು ಇಂಜೆಕ್ಷನ್ ನೀಡಿದ ವೈದ್ಯರನ್ನು ಪೊಲೀಸರು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ.
ನಾಗೇಂದ್ರಗೆ ಕಳೆದ ರಾತ್ರಿ ತೀವ್ರ ಜ್ವರ ಕಾಣಿಸಿಕೊಂಡಿದೆ ಕೂಡಲೇ ಆತನನ್ನು ವಕ್ಕಲೇರಿಯಲ್ಲಿರುವ ಸನ್ ರೈಸ್ ಖಾಸಗಿ ಕ್ಲಿನಿಕ್ ಗೆ ಕರೆದೊಯಿದಿದ್ದು ಅಲ್ಲಿನ ವೈದ್ಯರು ಆತನಿಗೆ ಇಂಜೆಕ್ಷನ್ ನೀಡಿದ್ದಾರೆ. ಇಂಜೆಕ್ಷನ್ ಪಡೆದ ಒಂದೇ ನಿಮಿಷಕ್ಕೆ ನಾಗೇಂದ್ರ ಮೃತಪಟ್ಟಿದ್ದಾನೆ.
ವೈದ್ಯರ ನಿರ್ಲಕ್ಷ್ಯದಿಂದ ಯುವಕ ಸಾವನಪ್ಪಿದ್ದಾನೆ ಎಂದು ಇಂಜೆಕ್ಷನ್ ನೀಡಿದ ವೈದ್ಯರ ವಿರುದ್ಧ ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ ಮೃತ ನಾಗೇಂದ್ರ ಸಹೋದರ ರವಿ ಹೇಳುವಂತೆ ನಾಗೇಂದ್ರಗೆ ರಾತ್ರಿ ಜ್ವರ ಬಂದಿತ್ತು, ಕೂಡಲೇ ಆತ ಸನ್ ರೈಸ್ ಕ್ಲಿನಿಕ್ ಗೆ ಕರೆದುಕೊಂಡು ಬಂದಿದ್ದೆ. ವೈದ್ಯರು ಒಂದು ಇಂಜೆಕ್ಷನ್ ನೀಡಿದರು. ಆದರೆ ಇಂಜೆಕ್ಷನ್ ನೀಡಿದ ಕೇವಲ ಒಂದೇ ನಿಮಿಷದಲ್ಲಿ ಆದ ಸಾವನ್ನಪ್ಪಿದ್ದಾನೆ ಎಂದು ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಆರ್ಯವೇದ ವೈದ್ಯನಿಂದ ಆಲೋಪತಿ ಚಿಕಿತ್ಸೆ
ಇಂಜಕ್ಷನ್ ನೀಡಿದ ವೈದ್ಯನನ್ನು ರಫೀಕ್ ಎನ್ನಲಾಗಿದ್ದು ಈತ ಬಂಗಾರಪೇಟೆಯ ತಾಲ್ಲೂಕು ಆಸ್ಪತ್ರೆಯಲ್ಲಿ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುವ ಆಯುರ್ವೇದ ವೈದ್ಯನಾಗಿದ್ದು ವಕ್ಕಲೇರಿ ಗ್ರಾಮದಲ್ಲಿ ಖಾಸಗಿ ಆಸ್ಪತ್ರೆ ತೆರೆದು ಅಲೋಪತಿ ಚಿಕಿತ್ಸೆ ನೀಡುವ ಮೂಲಕ ಎಡವಟ್ಟು ಮಾಡಿದ್ದಾರಂತೆ,ಈ ಮೊದಲೂ ಇದೆ ವ್ಯಕ್ತಿ ಇಂತಹುದೆ ಎಡವಟ್ಟು ಮಾಡಿ ಒಬ್ಬರ ಜೀವಕ್ಕ ಕಂಟಕ ತಂದಿದ್ದರಾದರು ಆರೋಗ್ಯ ಇಲಾಖೆ ಎಚ್ಚೆತ್ತುಕೊಂಡಿರಲಿಲ್ಲ ಎನ್ನುವ ಆರೋಪ ಇದೆ.