ಶ್ರೀನಿವಾಸಪುರ: ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾಗಿದ್ದು ಗ್ರಾಮಗಳ ಅಭಿವೃದ್ದಿಗೆ ಅನಕೂಲವಾಗಿದ್ದು ಇದನ್ನು ಸದ್ಬಳಿಕೆ ಮಾಡಿಕೊಂಡು ಗ್ರಾಮಗಳ ಅಭಿವೃದ್ಧಿಯಲ್ಲಿ ಪಕ್ಷಾತೀತವಾಗಿ ಒಗ್ಗೋಡಿ ಗ್ರಾಮಗಳನ್ನು ಅಭಿವೃದ್ಧಿ ಪತದತ್ತ ಸಾಗಲು ಮುಂದಾಗುವಂತೆ ಕೋಲಾರ ಜಿಲ್ಲಾ ಪಂಚಾಯಿತಿ ಮುಖ್ಯಕಾರ್ಯನಿರ್ವಹಣಾಧಿಕಾರಿ ಡಾ.ಪ್ರವೀಣ್ ಕುಮಾರ್.ಪಿ.ಬಾಗೇವಾಡಿ ಹೇಳಿದರು.ಅವರು ಇಂದು ತಾಲೂಕಿಗೆ ಭೇಟಿ ನೀಡಿ ತಾಲೂಕು ಪಂಚಾಯಿತಿ ಕಚೇರಿಯಲ್ಲಿ ಕಡತಗಳನ್ನು ಪರಿಶೀಲಿಸಿ ನಂತರ ಕಸಬಾ ಹೋಬಳಿ ಜೆ.ತಿಮ್ಮಸಂದ್ರ ಗ್ರಾಮಕ್ಕೆ ಭೇಟಿ ಕೊಟ್ಟು ಮಾತನಾಡಿದರು.
ಪಂಚಾಯಿತಿ ಅಧ್ಯಕ್ಷರ ನೇತೃತ್ವದಲ್ಲಿ ಗ್ರಾಮಸಭೆ, ವಾರ್ಡ್ ಸಭೆಗಳನ್ನು ನಡೆಸಿ ಗ್ರಾಮಗಳ ಸಮಸ್ಯೆಗಳನ್ನು ಚರ್ಚಿಸಿ ಆಯಾ ಗ್ರಾಮಗಳಿಗೆ ಸಂಬಂದಿಸಿದಂತೆ ಕುಡಿಯುವ ನೀರಿಗೆ ಆದತ್ಯೆ ನೀಡಿ ಬೀದಿ ದೀಪ ಇನ್ನಿತರೆ ಅಗತ್ಯ ಕಾಮಗಾರಿಗಳಿಗೆ ಪಟ್ಟಿಯನ್ನು ಮಾಡುವಂತೆ ಸೂಚಿಸಿದರು.
ಇ-ಸ್ವತ್ತುಖಾತೆಗೆ ಅರ್ಜಿಗಳು ಬಂದಾಗ ಸಕಾಲದಲ್ಲಿ ಸಾರ್ವಜನಿಕರಿಗೆ ತೊಂದರೆಯಾಗದಂತೆ ಬಗೆಹರಿಸಿ ಜೆ.ತಿಮ್ಮಸಂದ್ರ ಗ್ರಾಮಪಂಚಾಯಿತಿ ಕಚೇರಿಯಲ್ಲಿ ನಡೆಯುತ್ತಿರುವ ತರಬೇತಿ ಕಾರ್ಯಾಗಾರವನ್ನು ವಿಕ್ಷಿಸಿದರು. ಗ್ರಾಮಪಂಚಾಯಿತಿಯಲ್ಲಿ ನರೇಗಾ ಕಾಮಗಾರಿಗಳ ದಾಖಲೆಗಳನ್ನು ಹಾಗು ಇತರೆ ದಾಖಾಲೆಗಳ ಪರಿಶೀಲಿಸಿದ ಅವರು ಆಲವಾಟ ಶಾಲೆಗೆ ಭೇಟಿ ನೀಡಿ ವಿದ್ಯಾರ್ಥಿಗಳೊಂದಿಗೆ ಸಮಾಲೋಚನೆ ನಡೆಸಿ ಶೈಕ್ಷಣಿಕ ಪ್ರಗತಿ ಪರಿಶೀಲಿಸಿದರು. ಅಲ್ಲಿ ನಡೆಯುತ್ತಿರುವ ಶಾಲೆ ಕಾಂಪೌಂಡ್ ಶೌಚಾಲಯಗಳ ಕಾಮಗಾರಿಗಳನ್ನು ಪರಿಶೀಲಿಸಿದರು. ಕಲ್ಲೂರು ಗ್ರಾಮದಲ್ಲಿನ ಜೆಜೆಎಂ ಕಾಮಗಾರಿ ಪರಿಶೀಲಿಸಿದರು. ಈ ಸಂದರ್ಭದಲ್ಲಿ ತಾಲೂಕು ಪಂಚಾಯಿತಿ ಇಒ ಶಿವಕುಮಾರಿ , ಬಿಇಒ ಬಿ.ಸಿ.ಮುನಿಲಕ್ಷ್ಮಯ್ಯ, ಬಿಆರ್ಸಿ ವಸಂತ, ಅಕ್ಷರ ದಾಸೋಹ ಸಹಾಯಕ ನಿರ್ದೇಶಕಿ ಸುಲೋಚನ, ತಾಲೂಕು ಪಂಚಾಯಿತಿ ಸಹಾಯಕ ನಿರ್ದೇಶಕ ರಾಮಪ್ಪ,ಇಸಿಒ ಸುಬ್ರಮಣಿ, ಜೆ.ತಿಮ್ಮಸಂದ್ರ ಪಿಡಿಒ ವಿನೋಧ, ಗ್ರಾ.ಪಂ ಸದಸ್ಯ ನಾಗೇಶ್ರೆಡ್ಡಿ, ಜೆಜೆಎಂ ಅಭಿಯಂತರ ಗೌತಮ್ ಮುಂತಾದವರು ಇದ್ದರು.